Kannada Kavana Sankalana - ಕವನ ಸಂಕಲನ
ವಿಷಯ : ನವರಸಗಳು!!!
ಪರರ ಪರಿಚಯದ ಚಿಲುಮೆ ಮನಸೂರೆಗೊಂಡು
ಪರಿತಪಿಸುವ ಚಟಕೆ ...
ಕಣ್ಣಂಚಿನ ಕಾಡಿಗೆಯು ಕರೆನೀಡಿ ಕರೆ ದಿರಲು
ಕಾಣದ ಕೈಗಳು ಬಾಚಿ ತನ್ನೆಡೆಗೆ ಸೆಳೆ ದಿರಲು
ಸೋತ ಮನಕೆ ಶರಣಾಗತಿಯೇ ಪ್ರಥಮ ...।
ಇಂದು ನೆನ್ನೆಯದಲ್ಲ ಈ ಮಾತು
ಪೂರ್ವ ಜನ್ಮದ ರುಜುವಾತು ...
ಮನಸ ಮಂಟಪವ ತುಂಬಿದೆ ನೀ ಅಂದು
ಜೋಪಾನ ಮಾಡಿಟ್ಟುಕೊಂಡು ನಾ ಬಂದೆ
ಇಂದು ನಾಳೆಗಳ ಚಿಂತೆ ಇಲ್ಲ ನೀ ಜೊತೆ ಇದ್ದರೆ
ಬಲಗಾಲಿಟ್ಟು ಒಳಗಡೆ ಬರುವೆಯ...ಬರಬಡಿದ ಜೀವಕೆ ತಂಪೆರೆಯಲು!!!
ಪ್ರೀತಿಸುವ ಮನವು ಮರುಗುತಿರಲು
ಮರೆಯಾಗಿ ಹೋದೆ ನೀ
ಕಣ್ಣೀರು ಕೆನ್ನೆ ಸೋಕಿ ಜಾರುತಿರಲು
ನೋಡದೆ ಹೋದೆ ನೀ
ತೋಡಿಕೊಳ್ಳಲಾಗದ ದುಃಖ ಹುಮ್ಮಳಿಸುತ್ತಿರಲು
ಜೊತೆ ಇರದೆ ಒಂಟಿತನಕೆ ನಾಂದಿ ಆದೆ ನೀ
ನೀ ನನ್ನವಳೆಂಬುವ ಚಿತ್ತಕೆ ... ಚಿತೆ ಇಟ್ಟು ಹೋದೆ
ಮರುಕಳುಹಿಸು ನೀ, ಜೀವ ಹಾನಿಯಾಗುವ ಮುನ್ನ!!!
ಹೋಗುವ ದಾರಿಯಲಿ ಕಂಡಳು ಕನ್ಯೆ
ತಿರುಗಿ ತಿರುಗಿ ನೋಡಿದಳು ನನ್ನೇ ....
ಏನೋ ಆಗುವ ಮುನ್ಸೂಚನೆಯನ್ನೇ
ಕಂಡು ಕೊಳ್ಳಲು ಹಿಂಬಾಲಿಸಿದೆ ಅವಳನ್ನೇ
ಹಿಂದೆ ತಿರುಗಿ ಕೊಟ್ಟಳು ನಗುವನ್ನೇ
ಅಯ್ಯೋ ಶಿವನೆ...ವರ್ಣಿಸಲಾಗದು ಆ ನೋಟವನ್ನೇ!!!
ಕನಸುಗಳ ಕಟ್ಟೋ ಕಣ್ಣಿಗೆ
ಭೂತಕಾಲದ ಭೂನಾದಿಯಿರಲಿ
ಭವಿಷ್ಯದ ನೆರಳಿರಲಿ
ಈ ಕ್ಷಣದ ಅರಿವಿರಲಿ !!!
ಬರುವಾಗ ಬಂದಿರದ ... ಹೋಗುವಾಗ ಬರದಿರದ
ನಾನು ನನ್ನದೆಂಬುದು , ಇಂದು ಮಾತ್ರ
ಬಾಳ ಪಯಣದಲಿ ... ಬರುವದನೆಲ್ಲ ಉಪಚರಿಸಿ
ನಾವು ನಮ್ಮದೆಂಬುವ ನೆಲೆಕಟ್ಟು.. ಹೋಗುವಾಗ ಬರುವರು ನೂರೆಂಟು!!!
it is supereb
ReplyDelete